Ambara Chumbitha Prema - Video Song - Shrungara Kavya | Raghuveer | Sindhu | Hamsalekha

preview_player
Показать описание
Kannada Movie: Shrungara Kavya
Song: Ambara Chumbitha Prema - HD Video
Actor: Raghuveer, Sindhu
Music: Hamsalekha
Singer: SPB, K.S.Chithra
Lyrics: Hamsalekha
Director: S Mahendar
Year:1993

Song Lyrcis:

ಹೆಣ್ಣು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಗಂಡು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಹೆಣ್ಣು : ನವ ಚೈತ್ರ ನವ ತರುಣ ಗಂಡು : ನವ ಚೈತ್ರ ನವ ತರುಣ
ಹೆಣ್ಣು : ಬದುಕಿನ ತುಂಬ ತುಂಬಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ...
ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಓ.. ಓ.. ಓ.. ಓ.. ಓ.. ಓ..

ಹೆಣ್ಣು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಗಂಡು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಹೆಣ್ಣು : ಹೊಸ ಮಾತು ಹೊಸ ಮುತ್ತು ಗಂಡು : ಹೊಸ ಮಾತು ಹೊಸ ಮುತ್ತು
ಹೆಣ್ಣು : ಬದುಕಿನ ತುಂಬ ತುಂಬಿದೆ
ಗಂಡು : ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಹೆಣ್ಣು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ

ಹೆಣ್ಣು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಗಂಡು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಹೆಣ್ಣು : ಹೊಸದೆಲ್ಲ ಸವಿ ಬೆಲ್ಲ ಗಂಡು : ಹೊಸದೆಲ್ಲ ಸವಿ ಬೆಲ್ಲ
ಹೆಣ್ಣು : ಬದುಕಿನ ತುಂಬ ಸೇರಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Shrungara Kavya – ಶೃಂಗಾರ ಕಾವ್ಯ 1993*SGV
Рекомендации по теме
Комментарии
Автор

ತುಂಬ ತುಂಬ ಅತ್ಯ ಅಮೋಘವಾದ ಸಾಹಿತ್ಯ ಹಾಗೂ ಸಂಗೀತ ಎಸ್ ಮಹೇಂದರ್ ನಿರ್ದೇಶನದ ಚಿತ್ರ ನೈಜ ಅಭಿನಯ ರಘುವೀರ್ ಹಾಗೂ ಅವರ ಧರ್ಮ ಪತ್ನಿ ಈ ಚಿತ್ರದಲ್ಲಿ ಈ ಹಾಡು ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕೆಂದು ಆಸೆ ಚಿತ್ರಕಥೆ ಸೂಪರ್

rangnathrangnath
Автор

❤ಹಳೆಯ ಹಾಡು ಕೇಳ್ತಾ ಇದ್ರೆ ಎಲ್ಲೋ kalde ಹೋಗ್ತೀವಿ aa shaleya ata adida ನೆನಪುಗಳು kannalli ಹಾಗೆ ಬಂದು ಬಿಡುತ್ತೇ😢😢😢❤❤❤

DBbaragade
Автор

ಈ ಜೋಡಿ ನೋಡಿದಾಗಲೋಮ್ಮೆ ಕರುಳು ಚುರುಕ್ ಅನ್ನುತ್ತದೆ.😢😢😢

Basavaraj-bxqd
Автор

ಕನ್ನಡ ಸಾಹಿತ್ಯದ ಲೋಕದ ಶ್ರೀಮಂತ ಭಾಷೆ ಇಂತಹ ಅದ್ಭುತ ಭಾಷೆಯ ಸರಿ ಸಮಾನಕ್ಕೆ ಬೇರೆ ಭಾಷೆಗಳು ಬರಲಾಗದಷ್ಟು ಕನ್ನಡ ಬೆಳೆದಿದೆ.. ಕನ್ನಡದ ಜನಪದ ..ಕನ್ನಡದ ಪದ ಪುಂಜಗಳು 25 ಕ್ಕೂ ಹೆಚ್ಚು ತರದ ಶೈಲಿಯ ಕನ್ನಡ.. ಕನ್ನಡ ಲಿಪಿ ಪ್ರಪಂಚದ ಲಿಪಿಗಳ ರಾಣಿ..ಇಂತಹ ಅಮೋಘರತ್ನ ದಂತ ಭಾಷೆಯ ವಾರಸುದಾರ ಎಂದೂ ನಾನು ಹೆಮ್ಮೆಯಿಂದ ಹೇಳುತ್ತೇನೆ.. 🧡❤️

ಹಳೆಯ ಸಾಹಿತ್ಯಕಾರರು ಕನ್ನಡ ಬಳಸಿದಂತೆ ಈಗಿನ ಸಾಹಿತ್ಯಕಾರರು ಬಳಸಿಕೊಳ್ಳಲು ಅಸಮರ್ಥರಾಗಿದ್ದಾರೆ ತುಂಬಾ ಜನ ಸಾಹಿತ್ಯಕಾರರು.😢

Raja-kybg
Автор

2050 bandru nav e tara song keltine anovru like madi❤😂

jeevanjeev
Автор

ಅಂಬರ ಚುಂಬಿತ ಗೀತೆಯನ್ನು ಮೀರಿಸುವ ಹಾಡು ಯಾವುದು ಇಲ್ಲ

ShrinivasapoojariShrinivaspooj
Автор

2024 ಯಾರೆಲ್ಲಾ ಕೇಳ್ತಾ ಇದ್ದೀರಾ ಒಂದು ಲೈಕ್ ಕೊಡಿ ❤

gururaja
Автор

ಕೇಳ್ತೀನಿ ಒಂದು ಸಲ. ಹಳೆ ಸಾಂಗ್ಸ್ ಕೇಳ್ತೀನಿ... ಸಾವಿರ ಸಲ

pruthvirajmb
Автор

3.34 to 3.47 golden lines so sweet spb sir and k s chitra madam

MareppaKuntanoor
Автор

ಕನ್ನಡ ನಾಡಿನಲ್ಲಿ ಜನಿಸಿದ ನಾವುಗಳೇ ಧನ್ಯರು, ನೂರು ವರ್ಷ ಕಳೆದರೂ ಸಹ ಇಂತಹ ಗೀತೆಗಳು ಬರುವುದಿಲ್ಲ

thejasmgthejasmg
Автор

What a lovely choreography.. bowing my head for them..
Boss of lyrics and music Mr Hamsalekha has touched the sky ...balu and chitra has created magic'...
S mahender and cameraman has made this song visible even though the hero and heroine are not glamourous... Even the actors have done their best and upto to the mark and better than so many new heros and heroines we have now ..

ManjunathKC-iw
Автор

ಎಂದೂ ಮರೆಯದ ಹಾಡು ನನ್ನಗೆ ತುಂಬಾ ಇಷ್ಟವಾಡ ಹಾಡಲ್ಲಿ ಇದು ಒಂದು

sujatabilur
Автор

ನೊರಾರು ಶತಮಾನ ಕಳೆದರು ಈ ಸಿನೆಮಾ ಬದುಕುಳಿಯುತದೆ

swamygowda
Автор

ಶೃಂಗಾರ ಕಾವ್ಯ ♥️💚
ಈ ಹಾಡಿಗೆ ಕೊರಿಯೋಗ್ರಾಫ್ ಮಾಡಿದವರಿಗೆ ಅನಂತ ವಂದನೆಗಳು
ಹಂಸಲೇಖ ಸರ್ ಮ್ಯೂಜಿಕ್ 🔥💯
ಮಿಸ್ ಯು ನ್ಯಾಚುರಲ್ ಹೀರೋ ರಘುವೀರ್ ಸರ್ 🥰

CKannadaMusic
Автор

ಮಾರಿಯೋಕೆ ಆಗುತ್ತ ಈ ಸಾಂಗ್ ಇವರು ಲವರ್ ಸ್ಟೋರಿ ನಾ ❤😢

kicchasudeep
Автор

Raghuveer sir innu usiraadtidaare anstide enta song keluvaaga....

sachinbhandari
Автор

ನಾವು 80 ರ ಹುಡುಗರು...
ನಾವೆ ಪುಣ್ಯವಂತರು .... ❤❤❤❤

hoysalalife
Автор

ಪ್ರೀತಿಯು ತುಂಬಿದ... ಪ್ರೀತಿಯು ತುಂಬಿದ... ಪ್ರೀತಿಯು ತುಂಬಿದ ಜೀವನ ಪಾವನ... ಪಾವನ... ಹೃದಯಕೆ ಉಸಿರಿನ ಗಾಯನ....ಆ....
ಇದು ದೇವರ ಆಶೀರ್ವಾದವೂ...
ಇದು ಹೃದಯಗಳ ಮಿಲನವೂ...
ಇದು ಭಾವನೆಗಳ ಪ್ರೇಮಾನುಭವವೂ...

annappaks
Автор

Overall good 👍👍👍👍👍👍🎉🎉🎉🎉 ಇವಾಗ ಇದ್ದಿದ್ರೆ ಇವರೇ ಮುಂದು....

hanumanthappamanjanna
Автор

Olle movie...duradrshta hero... tragedy

ayubis