Dwapara Song | Lyrics | Kannada | Krishnam Pranaya Sakhi | Ganesh | Malvika | View Trend Lyrics |

preview_player
Показать описание
#goldenstarganesh #krishnampranayasakhi

ORGINAL SONG CREDITS TO:-

Starring: Golden ⭐ Ganesh, Malvika Nair
Movie: Krishnam Pranaya Sakhi
Song: Dwapara
Music: Arjun Janya
Singer: Jaskaran Singh
Lyrics: Dr.V.Nagendra Prasad

Lyrics In Kannada:-

ದ್ವಾಪರ ದಾಟುತ ನನ್ನನೇ ನೋಡಲು
ನನ್ನನೇ ಸೇರಲು ಬಂದ ರಾಧಿಕೆ
ಹಾಡಲಿ ಹಾಡಲು ಮಾತಲಿ ಹೇಳಲು
ಸಾಧ್ಯವೇ ಇಲ್ಲದ ರಾಗ ಮಾಲಿಕೆ

ಸಖಿ ಸಖಿ ನನ್ನ ರೂಪಸಿ
ಸಖಿ ಸಖಿ ನಿನ್ನ ಮೋಹಿಸಿ
ನೀನೇ ನನ್ನ ಪ್ರೇಯಸಿ

ಜೇನ ದನಿಯೋಳೆ ಮೀನ ಕಣ್ಣೋಳೆ
ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ
ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ

ಬೇರೆ ದಾರೀನು ಇಲ್ಲ ನನಗಿನ್ನು
ನೀನು ಸಿಕ್ಕಾಗಿದೆ ನಾನು ಹುಡುಕಿದ್ದು
ನನ್ನ ನಿಲ್ದಾಣ ನೀನೆ ಇನ್ನೇನಿದೆ

ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ
ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ

ಅರಳದ ಸುಮಗಳ ಅರಳಿಸುವವಳು
ಕುಸುಮಗಳಂತ ಬೆರಳು ಚೆಂಮಲ್ಲಿಗೆಯೆಂತಿವೆ ಬೆರಳು

ಗಿಳಿಗಳ ಬಳಗಕೆ ಸರಿಗಮ ಕಲಿಸುವ
ಇನಿಧನಿ ಜಿನುಗೂ ಕೊರಳು
ಬಲು ವಿಸ್ಮಯ ನಿನ್ನ ಕೊರಳು

ಸೌಂದರ್ಯದಲ್ಲಿ ಗಾಂಭೀರ್ಯವಂತೆ
ಆಂತರ್ಯದಲ್ಲಿ ಔದಾರ್ಯವಂತೆ
ನೀನೇ ನನ್ನ ಪ್ರೇಯಸಿ

ಪಾದ ಪದ್ಯಾನ ಬರೆದ ಹಾಗಿರುವ
ಹೆಜ್ಜೆಯಾ ಮುದ್ರೆಯೂ
ನಿನ್ನ ನಡೆ ಕಂಡು ಹಿಂದೆ ಬರಬಹುದು
ತುಂಗೆಯೂ ಭದ್ರೆಯೂ

ನಾನು ಶ್ರೀಕೃಷ್ಣ ನೀನೇ ನನ ಭಾಮೆ
ಮೂಡಿದೆ ಪ್ರೀತಿಯು ಎಷ್ಟು ಜನ್ಮಗಳ
ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು

ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ
ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ

ನೀ ನಕ್ಕರೆ ಸಕ್ಕರೆ ಅರರೆರೆ ಎಂದೂ
ಬ್ರಹ್ಮನಿಗೂನು ಬೆರಗು ನೀನೆಂದರೆ
ಬೆರಗಿಗೂ ಬೆರಗು ಬರೆದರೆ ಮುಗಿಯದು
ಪದದಲ್ಲಿ ಸಿಗದು ರತಿಯರಿಗಿಂತ ಸೊಬಗು

ಮೈ ಮಾಟವೆ ಮೋಹಕ ಸೊಬಗು
ಲಾವಣ್ಯ ನೋಡಿ ನಾ ಧನ್ಯನಾದೆ
ತಾರುಣ್ಯ ಮೋಡಿ ಹೀಗಾಗಿ ಹೋದೆ
ನೀನೇ ನನ್ನ ಪ್ರೇಯಸಿ

ಜೇನ ದನಿಯೋಳೆ ಮೀನ ಕಣ್ಣೋಳೆ
ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ
ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ

ಬೇರೆ ದಾರೀನು ಇಲ್ಲ ನನಗಿನ್ನು
ನೀನು ಸಿಕ್ಕಾಗಿದೆ ನಾನು ಹುಡುಕಿದ್ದು
ನನ್ನ ನಿಲ್ದಾಣ ನೀನೆ ಇನ್ನೇನಿದೆ

Copyright Disclaimer under section 107 of the Copyright Act of 1976, allowance is made for "fair use" for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing. I don't own the music, pictures in this video.
Рекомендации по теме
Комментарии
Автор

ಒಳ್ಳೆ ಸೊಗಸಾದ ಸಾಲುಗಳು.. ನಾಗೇಂದ್ರ ಸರ್ ಗೆ ಮತ್ತೊಮ್ಮೆ ಅಭಿನಂದನೆಗಳು❤🙏

basavrajaili
Автор

ಬರವಣಿಗೆ ಬರೆದ ವಿ ನಾಗೇಂದ್ರ ಪ್ರಸಾದ್ ಸರ್. ಗೆ ❤❤

MadhuSri-qi
Автор

ಹುಚ್ಚು ಪ್ರೀತಿ ಪ್ರೇಮ ಮರೆಯಲಾಗದು, ಎನ್ನುವುದಕ್ಕೆ ಸಾಕ್ಷಿ ಈ ಸಾಂಗ್ ಸೂಪರ್ ಸರ್ ಧನ್ಯವಾದಗಳು

parashuramkanapur
Автор

ಹೆಣ್ಣಿನ ಅದ್ಭುತ ವರ್ಣನೆ..ಸೊಗಸಾದ ಸಾಲುಗಳು, ಕೇಳಲು ಸುಮಧುರ

sumamsuma
Автор

👌👌👌ಆಹಾ ಅದ್ಭುತ ಸಾಹಿತ್ಯ...
ಗಾಯನ...
ನೃತ್ಯ...
ಎಲ್ಲಾ ಸೂಪರ್...
ಹೊಸ ಗಾಯಕ ಪ್ರತಿಭೆಗಳು ಮಿಂಚಲಿ...👍♥️

fuwbsou
Автор

ಸಾಹಿತ್ಯ, ಸಂಗೀತ, ಗಾಯನ ಮತ್ತು ನತ೯ನ ಎಲ್ಲಾ ಸೂಪರ್....

gangasubhashashwathpur
Автор

ಹುಚ್ಚು ಹಿಡಿಸುವ ಹಾಗಿದೆ ಎರಡು ದಿನದಲ್ಲಿ 200ಬಾರಿ ಕೇಳಿದ್ದೇನೆ

sheelasatya
Автор

ಮಳೆ - ಗಾಲ - ದಲಿ ಇಂಥ ಕವಿ - ತಾ, ತರುತಾ ಸವಿ - ತಾ ! ಹಾಡಿನ ಲಯ ವ್ಹಾವ್‌ !! ಹೃದಯ ಪ್ರಳಯ !!!🤩

manjurajhn
Автор

ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಸೊಬಗು..ಸಂಗೀತ ಲೋಕಕ್ಕೆ ಹೊಸ ಮೆರಗು. 👋👋👋👌👌👌🙏

ravindras.t.
Автор

ಜೈ ಡಾ ವಿ ನಾಗೇಂದ್ರ ಪ್ರಸಾದ್ ❤
ಜೈ ಅರ್ಜುನ್ ಜನ್ಯ ❤
ಜೈ ಗಣೇಶ್ ❤

Lachamanna.
Автор

ಕಾಡಿನಲ್ಲಿ ಬಳಸಿರುವ ಪದಪುಂಜಗಳ ವರ್ಣನೆ ವರ್ಣನಾತೀತ ಮತ್ತು ಸೌಂದರ್ಯತೆ ಯಿಂದ ಕೂಡಿದೆ

hareeshavnhari
Автор

😮😮😮😮😮 ವಾವ್ ವಾವ್ ವಾವ್ ಸೂಪರ್ ಆಗಿದೆ ಹಾಡು ತುಂಬಾ ಇಷ್ಟ ಆಯ್ತು ಜಸ್ ಕರಣ್ ಸಿಂಗ್ ಗೆ ಇದು ಒಳ್ಳೆಯ ಆರಂಭ ❤❤❤❤❤❤❤🎉🎉🎉🎉🎉🎉🎉🎉🎉🎉😊😊🙋🫶🪷🌺🌻💚💛💟

shravanba
Автор

ನಮ್ಮ ಕರ್ನಾಟಕದ ಲೊಕೇಶನ್ ತೆಗಿಬೇಕಿತ್ತು ತುಂಬಾ ಸುಂದರವಾಗಿ ಕಾಣಿಸ್ತಿತ್ತು ಹಾಡು

SwamyMysore-or
Автор

ಇದನ್ನು ವರ್ಣಿಸಲು ಪದಗಳು ಸಾಲಲ್ಲ ಅಧ್ಬುತ ❤❤

vijayakumarhampannavarhamp
Автор

ಹಾಡು ಅತ್ಯದ್ಭುತವಾದ ಸಂಗೀತ
ನನ್ನ ಮನಸಿಗೆ ಒಕ್ಕಿದ ಸಂಗೀತ .wowwww

maruthisl
Автор

ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಸೂಪರ್

sudhayv
Автор

ಸೂಪರ್ ಸಾಂಗ್ ಸರ್ 👌❣️ಜಾಸ್ಕರಣ್ ಸಿಂಗ್ ಗೆ ಒಳ್ಳೇದು ಆಗಲಿ

hemanthak
Автор

Beautiful lyrics from Nagendra prasad sir ❤ and nice voice of Jaskaran

SunitaKochargi
Автор

Lyrics bombat Kannada sahitya always Rocks superb Nagendra sir keep rocking

dayahal
Автор

ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ...❤ ನಾನು ಹುಡುಕಿದ್ದು ನನ್ನ ನಿಲ್ದಾಣ ನೀನೆ ಇಂಥಾ ಬರವಣಿಗೆನ ಎಸ್ಟ್ ಹೇಳಿದ್ರು ಸಾಲದು...😍😍😍😍

sujithshet